ನಿರ್ಮಾಪಕರಿಗೆ ಒಳ್ಳೆಯದಾಗ ಬೇಕು - ಸಂಗೀತ ನಿರ್ದೇಶಕರುಗಳು
Posted date: 18 Sun, Oct 2015 – 05:43:16 PM

ಸಂಗೀತ ನಿರ್ದೇಶಕರು  ಪ್ಯಾಕೇಜ್ ಅಂತ ಲಕ್ಷಗಟ್ಟಲೆ ಸಂಭಾವನೆ ಪಡೆದುಕೊಂಡು  ಎನ್‌ಓಸಿ ಒಪ್ಪಂದಕ್ಕೆ ಸಹಿ ಹಾಕದೆ ನಿರ್ಮಾಪಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಬಂದಿತ್ತು. ಇದರ ಹಿನ್ನಲೆಯಲ್ಲಿ ಮೊದಲಬಾರಿ ಸುಮಾರು ೩೦ಕ್ಕೂ ಹೆಚ್ಚು ಸಂಗೀತ ನಿರ್ದೇಶಕರು ಮತ್ತು ಸಾಹಿತಿಗಳು ಸೂಚ್ಯವಾಗಿ ಹೇಳಲು ಮಾಧ್ಯಮದ ಮುಂದೆ ಹಾಜರಿದ್ದರು. ಮೊದಲು ಮಾತು ಶುರುಮಾಡಿದ ಸಾಹಿತಿ ನಾಗೇಂದ್ರಪ್ರಸಾದ್ ಆಡಿಯೋ ಕಂಪನಿಯವರು ನಮ್ಮ ಆಸ್ತಿ ಮಾರಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ಬಲವಂತವಾಗಿ ಕಸಿದುಕೊಳ್ಳುವುದು ಕಾನೂನುಬಾಹಿರವಾಗಿದೆ. ಪತ್ರದ ಮೇಲೆ ಸಹಿ ಹಾಕಿಸಿಕೊಳ್ಳುತ್ತಿರುವುದು ಅಸಂವಿಧಾನಿಕ. ಇದೇ ರೀತಿ ಮುಂದುವರೆದರೆ ದೊಡ್ಡ ಸಂಘಟನೆ ಆಗುತ್ತದೆ ಎಂಬ ಎಚ್ಚರಿಕೆ ಘಂಟೆಯನ್ನು ಕೊಟ್ಟರು. ನಮ್ಮಲ್ಲಿರುವ ಪ್ರತಿಭೆ ನಮಗೆ ಸಿಂಧುತ್ವ.

ಸಂಗೀತ ಸಂಸ್ಕಾರ, ಬರಹ ವೇದಾಂತ. ಹಾಡಿಗೆ ಸಂಯೋಜನೆ ಮಾಢುವಾಗ ಕೀ ಬೋರ್ಡ್ ಮುಂದೆ ಸಂಗೀತ ನಿರ್ದೇಶಕ ಬಡವನಾಗಿರುತ್ತಾನೆ. ನಮಗೆ ಭವಿಷ್ಯ ಇಲ್ಲ. ರಾಯಲ್ಟಿ ಎನ್ನುವುದು ವಿಮೆ ಇದ್ದಂತೆ ಅದನ್ನು ಕಸಿದುಕೊಳ್ಳಬೇಡಿ ಅಂತ ಅವಲತ್ತು ಮಾಡಿಕೊಂಡಿದ್ದು ಯೋಗರಾಜಭಟ್ಟರು. ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರ ನಡುವೆ ಒಪ್ಪಂದ ಅನ್ನುವುದು ಇತ್ತು. ಕಳೆದ ಒಂದು ವರ್ಷದಿಂದ ಆಡಿಯೋ ಕಂಪನಿಗಳು ಚಿತ್ರದ ಹಾಡುಗಳನ್ನು ಕೊಳ್ಳಬೇಕಾದರೆ ಎನ್‌ಓಸಿ ತರಲು ಅವರಿಗೆ ಬೇಡಿಕೆ ಇಡುತ್ತಿದ್ದಾರೆ. ನಾವುಗಳು ಸಹಿ ಮಾಢದೆ ಹೋದಾಗ ಇಲ್ಲಸಲ್ಲದ ಆರೋಪ ಮಾಡಿ ನಿರ್ಮಾಪಕರಿಗೆ ನಮ್ಮ ಮೇಲೆ ಗೌರವ ಇಲ್ಲದಂತೆ ಮಾಡುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ ಎಂಬ ಖೇದ ಮಾತು ಗುರುಕಿರಣ್ ಅವರದು.

ಅನೂಪ್‌ಸೀಳನ್ ಎನ್‌ಓಸಿ ಮತ್ತು ಕಾಪಿ ರೈಟ್ ಕಾಯ್ಕೆಯಲ್ಲಿರುವ ಮುಖ್ಯ ಅಂಶವನ್ನು ಓದಿ, ಒಂದು ವೇಳೆ ನಾವು ಬರೆದುಕೊಟ್ಟರೂ ಅದು ಗಣನೆಗೆ ಬರುವುದಿಲ್ಲ ಎಂದರು. ಸಂಗೀತ ನಿರ್ದೇಶಕನ ನೆಮ್ಮದಿ ಹಾಳು ಮಾಡಿದ್ದಾರೆ. ಒಬ್ಬರನ್ನೊಬ್ಬರು ಪ್ರೀತಿಸಿದರೆ ಇಂದು ಸೇರುವ ಪ್ರೇಮಯ ಬರುತ್ತಿರಲಿಲ್ಲ. ಅವರು ನಮ್ಮನ್ನು ಕೇವಲವಾಗಿ ನೋಡುತ್ತಾರೆ. ನಮ್ಮಲ್ಲಿ ಅವರಿಗೆ ಅಸ್ತ್ರ ಇರುವುದು ಕ್ಷಮೆ ಒಂದೇ.  ಏನೇ ಹೇಳಿದರೂ ಅವರನ್ನು ಕ್ಷಮಿಸುತ್ತೇವೆ  ಎಂಬ ಭಾವನಾತ್ಮಕ ಮಾತುಗಳನ್ನು ಅರ್ಜುನ್‌ಜನ್ಯಾ ನುಡಿದರು. ವಿದೇಶದಲ್ಲಿ ಒಂದು ಗೀತೆ ಕಂಪೋಸ್ ಮಾಡಿ ಹಾಡಿದ್ದೇನೆ. ಇವತ್ತು ಅದು ಪ್ರಸಾರವಾದಾಗ ಇಂತಿಷ್ಟು ಪೌಂಡು ಬರುತ್ತಲೆ ಇದೆ. ಆ ನಿಯಮ ನಮ್ಮಲ್ಲಿ ಆಗಬೇಕು. ನಮಗೆ ಮಾನ್ಯತೆ ಸಿಗಬೇಕು ಎಂದರೆ ಮ್ಯೂಸಿಕ್ ಅಸೋಸಿಯೇಶನ್ ಆಫ್ ಇಂಡಿಯಾ,ಬಾಂಬೆ ಇಲ್ಲಿ ಸದಸ್ಯರಾಗಬೇಕು ಎಂದು ಅಭಿಪ್ರಾಯಪಟ್ಟರು ರಘುದೀಕ್ಷಿತ್.  ಪ್ರತಿಭೆ ಅನ್ನುವುದು ಕೆಲವರಿಗೆ ಮಾತ್ರ ಲಭಿಸುತ್ತದೆ. ಅದನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಢಬೇಡಿ, ನಾವುಗಳು ಸಹಿ ಮಾಡೋಲ್ಲ ಎಂಬ ಕೋಪದ ಉಕ್ತಿ ವಿ.ಮನೋಹರ್‌ರಿಂದ ಕೇಳಿಬಂತು. ಇದು ಒಂದು ರೀತಿಯ ಹುನ್ನಾರ. ರಿಂಗ್ ಟೋನ್, ಕಾಲರ್ ಟ್ಯೂನ್, ಡಿಜಿಟಲ್‌ನಿಂದ ಆಡಿಯೋ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದು ರೂಪಾಯಿಯಾದರೂ ನಮಗೆ, ನಿರ್ಮಾಪಕರಿಗೆ ನೀಡುತ್ತಿಲ್ಲ. ಎಲ್ಲವನ್ನು ಅವರೆ ಕಿತ್ತು ತಿನ್ನುತ್ತಿದ್ದಾರೆ.

ನಿರ್ಮಾಪಕರು ನಮಗೆ ಅನ್ನದಾತರು. ಅವರನ್ನು ಉಳಿಸುವ ಜವಬ್ದಾರಿ ನಮ್ಮದಾಗಿದೆ. ಚಿತ್ರರಂಗದಲ್ಲಿ ಭದ್ರತೆ ಇಲ್ಲ. ಪ್ರಸಕ್ತ ಕೆಲಸ ಮಾಡಿರುವುದನ್ನು ಮುಂದೆ ಗೌರವಧನದಿಂದ ಜೀವನಸಾಗಿಸಬಹುದು. ಬರುವ ಹಣದಿಂದ ನಮಗೂ ಒಂದಿಷ್ಟು ಕೊಡಿ ಅಂತ ಕೇಳುತ್ತಿದ್ದೇವೆ. ಅದು ನಿಯಮಾನುಸಾರ ಎನ್ನುತ್ತಾರೆ ಸಾಹಿತಿ ಕವಿರಾಜ್.  ಪ್ಯಾಕೇಜ್ ಅಂತ ತೆಗೆದುಕೊಂಡು ಕೆಲವೊಂದು ಸಲ ಒಳ್ಳೆ ಹಾಡುಗಳನ್ನು ನೀಡುವಾಗ ನಮ್ಮಂದಿಲೆ ಲಕ್ಷ ಹಣ ಖರ್ಚಾಗಿದೆ.  ನಮ್ಮ ಕಂಪೆನಿಯಿಂದ ಹಾಡುಗಳ ಹಕ್ಕುಗಳನ್ನು ಖರೀದಿ ಮಾಡುವಾಗ ಎನ್‌ಓಸಿ ಕೇಳುವುದಿಲ್ಲ. ಇದೇ ರೀತಿ ಸೌಂಡ್‌ಡಿಸೈನ್ , ಹಂಸಲೇಖಾರವರ ಸ್ಟ್ರಿಂಗ್ಸ್ ಸಂಸ್ಥೆರವರು ತೊಂದರೆ ಕೊಡುತ್ತಿಲ್ಲ ಎಂದರು ಹರಿಕೃಷ್ಣ. ಇಲ್ಲಿಗೆ ಸುಮ್ಮನಾಗದೆ ನಿವೇದನ ಪತ್ರವನ್ನು ಸಿದ್ದಪಡಿಸಿಕೊಂಡು ಕರ್ನಾಟಕ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ನೀಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದಾರೆ.


GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed